guru

ಸಂಸ್ಕೃತದಲ್ಲಿ ಗು ಎಂಬುದು ‘ಕತ್ತಲು’ ಎಂದೂ, ರು ಎಂಬುದು ಕತ್ತಲನ್ನು ಹೋಗಲಾಡಿಸುವ ಶಕ್ತಿ ಎಂದು ತಿಳಿಯುತ್ತದೆ. ಆದ್ದರಿಂದ ನಮ್ಮ ಅಜ್ಞಾನವೆಂಬ ಕತ್ತಲನ್ನು ಕಳೆಯುವವರು ಗುರುವರ್ಯರು. ಯಾರು ಕತ್ತಲು ಎಂಬ ಮಾಯೆಯಿಂದ ನಮ್ಮನ್ನು ಮುಕ್ತರನ್ನಾಗಿಸಿ ದಿವ್ಯಜ್ಞಾನವೆಂಬ ಪರಮಾರ್ಥ, ಅಥವಾ ಪರಮಾತ್ಮ ಅಥವಾ ನಮ್ಮ ಒಳಗೆಂಬ ಆತ್ಮನ ತಿಳುವಳಿಕೆಯನ್ನು ಪಡೆಯಲು ಪ್ರೇರಕರಾಗುತ್ತಾರೋ ಅವರೇ ಗುರುಗಳು.

ಈ ವಿಶ್ವದಲ್ಲಿ ನಾನಾ ವಿಚಾರಗಳನ್ನು ತಿಳಿಸಿ ಹಲವು ಅವೈಜ್ಞಾನಿಕ ತಿಳುವಳಿಕೆಗಳನ್ನು ಕಳೆಯುವುದರ ಮೂಲಕ ನಮ್ಮ ತಿಳುವಳಿಕೆ ಹೆಚ್ಚಿಸಿ ನಮ್ಮ ಬದುಕನ್ನು ಹಸನುಗೊಳಿಸಿರುವ ವಿಜ್ಞಾನಿಗಳು ಕೂಡಾ ಋಷಿ ಸದೃಶರಾದ ಗುರುಗಳ ಸಾಲಿಗೆ ಸೇರುತ್ತಾರೆ.

ಮತ್ತೊಂದು ಅರ್ಥದಲ್ಲಿ ‘ಗು’ ಎಂಬುದು ‘ಗುಣಾತೀತ’ ಮತ್ತು ‘ರು’ ಎಂಬುದು ‘ರೂಪವರ್ಜಿತ’ ಎಂಬುದರ ಪ್ರಾತಿನಿಧಿಕವಾಗಿದ್ದು ಗುಣಾತೀತ ಮತ್ತು ನಿರಾಕಾರನಾದ ಪರಮಾತ್ಮನನ್ನು ಕೂಡಾ ಸೂಚಿಸುತ್ತದೆ. ಹೀಗಾಗಿ ನಮ್ಮೊಳಗಿನ ದಿವ್ಯಚೇತನ ನಮ್ಮನ್ನು ಮಾರ್ಗದರ್ಶಿಸಿ ಕೈ ಹಿಡಿದು ನಡೆಸುತ್ತಿರುವ ಆ ಮಹಾನ್ ಶಕ್ತಿ ಕೂಡಾ ಗುರು.

ಹೀಗೆ ನಮ್ಮನ್ನು ಕೈ ಹಿಡಿದು ನಡೆಸಿರುವ, ಈ ವಿಶ್ವದಲ್ಲಿ ಹಲವು ಶ್ರೇಷ್ಠರ ರೂಪದಲ್ಲಿ ಅವತರಿಸಿ ಈ ಲೋಕವನ್ನು ಸಂಕಟಬಂದಾಗಲೆಲ್ಲಾ ಉದ್ಧರಿಸಿ ಸಲಹಿ, ಕೋಟ್ಯಾನುಕೋಟಿ ಜೀವಚರಗಳಂತೆ ಒಂದು ಕ್ಷುದ್ರ ಜಂತುವಾಗಬಹುದಿದ್ದ ಈ ಮಾನವಜೀವಿಗೆ ಶ್ರೇಷ್ಠತೆಯನ್ನು ಅನುಭಾವಿಸುವ ಅವಕಾಶವನ್ನು ನೀಡಿದ ಈ ಗುರುಪರಂಪರೆಗೆ ವಂದಿಸೋಣ. ನಾವು ನಮ್ಮ ಶ್ರೇಷ್ಠತೆಯನ್ನು ಅರಿತು ಅದಕ್ಕೆ ಅನುವಾಗಿ ನಡೆದುಕೊಳ್ಳುವ ಸಂಕಲ್ಪ ಮುಖೇನ ಈ ಶ್ರೇಷ್ಠತೆಯ ಗೌರವಗಳು ಪರಂಪರಾನುಗತವಾಗಿ ಈ ಲೋಕದಲ್ಲಿ ಶಾಶ್ವತವಾಗಿ ಉಳಿಯುವಂತೆ ಪ್ರಯತ್ನಶೀಲರಾಗೋಣ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s