Swami Vivekananda’s quotes

• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.

• ನೀವು ಪ್ರತಿಯೊಬ್ಬರೂ, ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸದ ಜವಾಬ್ಧಾರಿಯೆಲ್ಲವೂ ಇದೆಯೇನೋ ಎಂಬಂತೆ ಕೆಲಸ ಮಾಡಿರಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ನೀವು ನಿಮ್ಮ ಕೆಲಸಮಾಡಿಕೊಂಡು ಮುನ್ನಡೆಯಿರಿ.

• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.

• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

• ಯಾರಿಗೆ ತನ್ನಲ್ಲಿಯೇ ನಂಬಿಕೆಯಿಲ್ಲವೋ ಅವನೇ ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನೇ ನಾಸ್ತಿಕನೆಂದು.

• ಈ ಜಗತ್ತಿನ ಇತಿಹಾಸವೆಲ್ಲಾ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸವಾಗಿದೆ. ಆ ಶ್ರದ್ಧೆ ಮಾತ್ರವೇ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸಬಲ್ಲದು. ಆಗ ನೀವೇನನ್ನೇ ಬೇಕಾದರೂ ಸಾಧಿಸಬಲ್ಲಿರಿ.

• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’ ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ನೀವು ಇಂತಹ ಶಕ್ತಿಯನ್ನೂ ಛಾತಿಯನ್ನೂ ಪಡೆದಂತವರಾಗಿ; ಇದಕ್ಕಾಗಿ ಕಷ್ಟಪಟ್ಟು ದುಡಿಯಿರಿ. ನೀವು ಖಂಡಿತವಾಗಿ ಗುರಿ ಸೇರುವಿರಿ.

• ಪ್ರತಿಯಾಗಿ ಏನನ್ನೂ ಬಯಸಬೇಡಿ. ಹೆಚ್ಚು ಕೊಟ್ಟಷ್ಟೂ ನಿಮಗೇ ಹೆಚ್ಚು ಹೆಚ್ಚು ಬರುತ್ತದೆ.

• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.

• ಮಗು,, ಪ್ರೀತಿಗೆ ಸೋಲೆಂಬುದೇ ಇಲ್ಲ; ಇಂದೋ, ನಾಳೆಯೋ ಅಥವಾ ಯುಗಾಂತರದಲ್ಲೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನೀವು ನಿಮ್ಮ ಮಾನವಬಂಧುಗಳನ್ನು ಪ್ರೀತಿಸುತ್ತೀರೇನು? ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ

• ಜೀವನದಲ್ಲಿ ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕವೇ. ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬದುಕುಳಿದಿರುತ್ತಾರೆ. ಉಳಿದವರು ಬದುಕಿದ್ದರೂ ಸತ್ತಂತೆಯೇ.

• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.

• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.

• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.

• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.

• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

• ಹೇಡಿಗಳು ಮಾತ್ರ, ಬಲಹೀನರು ಮಾತ್ರವೇ ಪಾಪವನ್ನು ಮಾಡುವುದು. ಅವರು ಮಾತ್ರವೇ ಸುಳ್ಳು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿರಿ, ನೀತಿವಂತರಾಗಿರಿ, ಸಹಾನುಭೂತಿಯುಳ್ಳವರಾಗಿರಿ.

• ಸತ್ಯನಿಷ್ಠೆ, ಪಾವಿತ್ರ್ಯ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವೆಲ್ಲವನ್ನೂ ಎದುರಿಸಬಲ್ಲ.

• ಮೊದಲು ಸಚ್ಚಾರಿತ್ರ್ಯವನ್ನು ಬೆಳೆಸಿಕೊಳ್ಳಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯವೇ ಇದು.

• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.

• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಸಂಭವಿಸುತ್ತದೆ.

• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಅಚ್ಚುಕಟ್ಟಾಗಿ ಮಾಡಿ ನಿಮ್ಮ ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ನಾವು ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಿದಷ್ಟೂ ಕರ್ತವ್ಯಭಾರದಿಂದ ಪಾರಾಗುತ್ತೇವೆ.

• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.

• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಿತ.

• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ಯಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳಬೇಕಾದವರು ನಾವೇ.

• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಅವನೆಡೆಗೆ ಸಾಗುವುದು ಅಂದರೆ ಇದೇ.

• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.

• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವ ಶಕ್ತಿಯೂ ಅದನ್ನು ತಡೆಯಲಾರದು. ಅವುಗಳಿಗೆ ನೀವು ಚಾಲನೆ ನೀಡಿದಲ್ಲಿ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕೃತ್ಯಗಳಿಂದ ಪಾರಾಗಬಹುದು.

• ನಿಮ್ಮೊಳಗಿರುವುದನ್ನು ಪ್ರಯತ್ನಪೂರ್ವಕವಾಗಿ ಹೊರಹೊಮ್ಮಿಸಿ. ಆದರೆ ಅನುಕರಿಸಬೇಡಿ. ಇತರರಿಂದ ಒಳ್ಳೆಯದನ್ನೆಲ್ಲವನ್ನೂ ಸ್ವೀಕರಿಸಿ.

• ಇತರರಿಗೆ ಸ್ವಾತ್ಯಂತ್ರ್ಯವನ್ನು ಕೊಡಲು ಇಚ್ಚಿಸದವನು ಸ್ವಾತ್ಯಂತ್ರ್ಯಕ್ಕೆ ಯೋಗ್ಯನಲ್ಲವೇ ಅಲ್ಲ.

• ವೈಯಕ್ತಿಕವಾಗಿ ಯಾರೊಬ್ಬರನ್ನು ಪ್ರೀತಿಸುವುದೂ ಬಂಧನ. ಎಲ್ಲರನ್ನೂ ಸಮಾನವಾಗಿ ಪ್ರೀತಿಸಿ. ಆಗ ಎಲ್ಲ ಆಸೆಗಳೂ ಬಿದ್ದುಹೊಗುತ್ತವೆ.

• ಮಹಾಮೂರ್ಖನು ಕೂಡ ತನಗಿಷ್ಟವಾದ ಕಾರ್ಯವನ್ನು ಸಾಧಿಸಬಲ್ಲ. ಆದರೆ ಯಾರು ಯಾವುದೇ ಕೆಲಸವನ್ನಾದರೂ ತನಗೆ ಇಷ್ಟವಾಗುವಂತೆ ಮಾಡಬಲ್ಲನೋ ಅವನೇ ಬುದ್ಧಿವಂತ.

• ಮೊದಲು ಆಳಾಗುವುದನ್ನು ಕಲಿಯಿರಿ. ಆಗ ನಾಯಕನ ಅರ್ಹತೆ ನಿಮಗೆ ತಾನೇ ತಾನಾಗಿ ಬರುತ್ತದೆ.

• ಒಂದು ಸಾಮಾನ್ಯ ಕೆಲಸವನ್ನೂ ಅತ್ಯುತ್ತಮವಾಗಿ ಮಾಡುವುದರಿಂದ ಶ್ರೇಷ್ಠ ಪ್ರತಿಫಲ ದೊರಕುತ್ತದೆ.

• ದೈಹಿಕವಾಗಿ ಮತ್ತು ಮಾನಸಿಕವಾಗಿ ಒಬ್ಬ ವ್ಯಕ್ತಿಯು ಪರಿಶುದ್ಧನಾಗಿರದಿದ್ದರೆ, ಅವನು ದೇವಸ್ಥಾನಕ್ಕೆ ಹೋಗುವುದು ಮತ್ತು ದೇವರನ್ನು ಪೂಜಿಸುವುದರಿಂದ ಯಾವ ಪ್ರಯೋಜನವೂ ಆಗದು.

• ನೀವು ಆಧ್ಯಾತ್ಮಿಕರಾಗದೆ ಭಾರತದ ಪುನರುದ್ಧಾರ ಅಸಾಧ್ಯ. ಇದನ್ನು ಗಮನದಲ್ಲಿಟ್ಟುಕೊಳ್ಳಿ; ನೀವು ಆಧ್ಯಾತ್ಮ ಬಿಟ್ಟು ಭೋಗಪ್ರಧಾನ ಪಾಶ್ಚಾತ್ಯ ನಾಗರೀಕತೆಯನ್ನು ಬೆಂಬತ್ತಿದರೆ, ಅದರ ಪರಿಣಾಮವಾಗಿ ಇನ್ನು ಮೂರೇ ತಲೆಮಾರುಗಳಲ್ಲಿ ನಿಮ್ಮ ಜನಾಂಗ ನಾಶವಾಗುತ್ತದೆ.

• ಅವಿದ್ಯಾವಂತರಿಗೆ ಬೆಳಕು ತನ್ನಿ, ವಿದ್ಯಾವಂತರಿಗೆ ಹೆಚ್ಚು ಬೆಳಕು ತನ್ನಿ. ಏಕೆಂದರೆ ವಿದ್ಯೆಯ ಮಧ ಇಂದು ಹೆಚ್ಚು ಭಯಂಕರವಾಗಿದೆ.

• ಇರುವ ಏಕಮಾತ್ರ ದೇವತೆಯೂ, ನಾನು ನಂಬುವ ಏಕಮಾತ್ರ ದೇವತೆಯೂ ಆದ ಜೀವ ಸಮಷ್ಟಿಯ ಆರಾಧನೆಗಾಗಿ ನನಗೆ ಎಷ್ಟು ಜನ್ಮಗಳಾದರೂ ಪ್ರಾಪ್ತವಾಗಲಿ, ಎಂತಹ ದುಃಖಗಳಾದರೂ ಒದಗಲಿ. ಎಲ್ಲಕ್ಕಿಂತ ಹೆಚ್ಚಾಗಿ, ದುಷ್ಟ ನಾರಾಯಣ, ಆರ್ತ ನಾರಾಯಣ, ಸಮಸ್ತ ಜನಾಂಗದ ದರಿದ್ರ ನಾರಾಯಣ, ಈ ನಾರಾಯಣನೇ ನನ್ನ ವಿಶೇಷ ಆರಾಧ್ಯದೇವತೆ.

• ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಸಾಧಿಸುವುದಕ್ಕೆ ಹುಟ್ಟಿರುವಿರೆಂದು ನಂಬಿ. ನಾಯಿಮರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ. ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ.

“ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಭೋಧತ” – ಎಚ್ಚರಗೊಳ್ಳಿ, ಜಾಗೃತರಾಗಿ, ಎಲ್ಲಕ್ಕಿಂತ ಮಹತ್ವವಾದುದಕ್ಕೆ ನಿಮ್ಮನ್ನು ಅನುವುಗೊಳಿಸಿಕೊಳ್ಳಿ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s