adhika maasa

ಹಿಂದೂ ಧರ್ಮದಲ್ಲಿ ದೇವತೆಗಳಿಗೆ ವಿಶೇಷ ಸ್ಥಾನವಿದ್ದು ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಸಾತ್ವಿಕ ಗುಣವಿದೆ. ನಾವು ಆಚರಿಸುವ ಹಬ್ಬ ಹರಿದಿನಗಳಿಂದ ಹಿಡಿದು ಪ್ರತಿಯೊಂದರಲ್ಲೂ ಭಗವದ್ರೂಪವನ್ನು ಚಿಂತಿಸುವ ನಮಗೆ  ಪ್ರತಿ  ದಿನ,ಮಾಸಗಳೂ ಹೊರತಾಗಿಲ್ಲ. ೧೨ಮಾಸಕ್ಕೂ ಭಗವಂತ ಒಂದೊಂದು ರೂಪಗಳಿಂದ ನಿಯಾಮಕನಾಗಿದ್ದು  ಒಂದಕ್ಕಿಂತ ಒಂದು ಮಾಸಗಳು ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ಮೂರು ವರ್ಷಕ್ಕೊಮ್ಮೆ ಬರುವ “ಅಧಿಕ ಮಾಸಕ್ಕೆ” ವಿಶೇಷ ಸ್ಥಾನ ನೀಡಲಾಗಿದೆ. ಅಧಿಕ ಮಾಸದಲ್ಲಿ ಯಾವುದೇ ಹಬ್ಬಗಳು ಬರುವುದಿಲ್ಲವಾದರೂ ದಾನ,ಕರ್ಮಾನುಷ್ಠಾನ ಸಾಧನೆಗೆ ಅಧಿಕಮಾಸದಲ್ಲಿ ವಿಶೇಷ ಫಲವಿದೆ. ಅದಕ್ಕಲ್ಲವೇ “ಅಧಿಕಸ್ಯ ಅಧಿಕಫಲಂ” ಎಂದು ಹೇಳಿರುವುದು. ಇಂತಹಾ ಅಧಿಕ ಮಾಸ ಏಕೆ ಮಾಡಬೇಕು, ಹಿನ್ನೆಲೆ ಏನು, ಏನು ಫಲ, ೩೩ಭಗವದ್ರೂಪಗಳು ಯಾವುವು, ೩೩ ದಾನ ಏಕೆ ಮಾಡಬೇಕು ಇತ್ಯಾದಿಗಳನ್ನು ತಿಳಿಸುವುದೇ ಈ ಲೇಖನದ ಉದ್ದೇಶ.

[Adhika Masa is the thirteenth month in a Calender year followed by Lunar Calender, i.e., Chandramana reethya. It is not followed by those who are following Solar Calender, i.e., Sourmaana Reethya]

 ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ.

ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) 365, 2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾಗಿದೆ. ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಅಂದರೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಅಂದರೆ ನಿಯಮದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಇದು ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ ವ್ಯತ್ಯಾಸವಾಗುತ್ತದೆ. ಚಂದ್ರನು ಭೂಮಿಯ ಸುತ್ತಲು ಚಲಿಸುತ್ತಿರುವಾಗ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಚಾಂದ್ರಮಾನದ ವಾರ್ಷಿಕ ಚಲನೆ 29.531 x 12 = 354.372 ದಿವಸಗಳಾಗಿರುತ್ತದೆ.

[As per Chandramaana reethya, we have 354 days in a calendar year. But as per Sourmana reethya, (Solar Calender) we have 365 days. So, there is a difference of 11 days between Sourmana reethya and Chandramana reethya. So, these extra days difference of 11 days will be added, once in 33 months (32 months, 16 days , and 4 ghalige to be precise) , so that there is extra 29 or 30 days in that particular year. This concept of adding one extra month after every 33 months is known as Adhika Masa]

ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422

ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372

ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: 10.8702 ದಿವಸಗಳು

ಈ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಈ ವ್ಯತ್ಯಾಸ ಸರಿತೂಗಿಸಲು 3ನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕಮಾಸವಾಗಿರುತ್ತದೆ. ಹೀಗೆ 33ತಿಂಗಳಿಗೊಮ್ಮೆ ಒಂದು ಮಾಸವನ್ನು ಸೇರಿಸುವ ಪರಿಕಲ್ಪನೆಯೇ ಅಧಿಕ ಮಾಸ. ಈ ಹಿನ್ನೆಲೆಯಲ್ಲಿಯೇ ೩೩ ದಾನಗಳನ್ನು ಕೊಡುವ ಪದ್ಧತಿ  ಜಾರಿಯಲ್ಲಿರುವುದು. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಅಧಿಕ ಮಾಸವು ಹುಣ್ಣಿಮೆಯ ನಂತರ ಶುದ್ಧ ಪ್ರತಿಪದದಿಂದ ಪ್ರಾರಂಭವಾಗಿ ಅಮಾವಾಸ್ಯೆಯ ತನಕ ಆಚರಿಸಲಾಗುತ್ತದೆ. ಆದರೆ ಉತ್ತರ ಭಾರತದ ಜನರಿಗೆ ವೈಶಾಖ ಬಹುಳ ಪ್ರತಿಪದದಿಂದ ಪ್ರಾರಂಭವಾಗಿ ಹುಣ್ಣಿಮೆಗೆ ಮುಗಿಯುತ್ತದೆ.

Note : Normally Adhikamasa will be happening once in 33 months. Sometimes, it may happen in 29 months, 30 months, 31 months, and 35 months also due to the variations in Graha sanchara. That is why it is said in Mahabharatha that the Adhikamasa will be occurring twice in 5 years.

ಅಧಿಕಮಾಸದಲ್ಲಿ ೩೩ದೇವತೆಗಳ ವಿವರಣೆ:

ಅಷ್ಟ       (೮)  ವಸುಗಳು

ಏಕಾದಶ  (೧೧) ರುದ್ರರು

ದ್ವಾದಶ   (೧೨) ಆದಿತ್ಯರು.

             (೧) ಪ್ರಜಾಪತಿ

             (೧) ವಷಟ್ಕಾರ

ಒಟ್ಟು       ೩೩ ದೇವತೆಗಳು.

ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ:

ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ ೩೩ಅಪೂಪ ದಾನಕ್ಕೆ ವಿಶೇಷ ಫಲವಿದೆ. ೩೩ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ. ಅಧಿಕಮಾಸದ ಪ್ರತಿದಿನವೂ ಅದಾಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ಕಂಚಿನಪಾತ್ರೆಯಲ್ಲಿಟ್ಟು ಬೆಲ್ಲ ಮತ್ತು ತುಪ್ಪ ಸಹಿತವಾಗಿ ತಾಂಬೂಲ ದಕ್ಷಿಣೆಯೊಂದಿಗೆ ಶ್ರೇಷ್ಠ ಬ್ರಾಹ್ಮಣರಿಗೆ ದಾನ ಕೊಡಬೇಕು.  ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ  ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ.

ಅಪೂಪದಾನ ಪ್ರಮಾಣ ಶ್ಲೋಕ :

ತ್ರಯಸ್ತ್ರಿಂಶದ ಪೂಪಾನ್ನಂ ಕಾಂಸ್ಯಪಾತ್ರೇ ನಿಧಾಯ ಚ|

ಸಘೃತಂ ಹಿರಣ್ಯಂಚ ಬ್ರಾಹ್ಮಣಾಯ ನಿವೇದಯೇತ್||

 ಅಧಿಕ ಮಾಸದಲ್ಲಿ ಮಾಡಬೇಕಾದ ದಾನ ಕರ್ಮಗಳು

ಅಪೂಪದಾನ, ದೀಪದಾನ, ಭಗವಂತನ ಪ್ರೀತಿಗಾಗಿ ಅಖಂಡ ದೀಪ ಉರಿಸುವುದು, ಚಾತುರ್ಮಾಸ್ಯವಿದ್ದರೆ ಅಧಿಕ ಮಾಸದಲ್ಲಿ ಚಾತುರ್ಮಾಸ್ಯ ಆಚರಿಸುವುದು  ಇನ್ನೂ ವಿಶೇಷ , ನಿತ್ಯ ನದಿ ಸ್ನಾನ, ಏಕಾದಶಿ ಉಪವಾಸ, ಏಕಭುಕ್ತ ಭೋಜನ, ಧಾರಣೆ-ಪಾರಣೆ, ಬ್ರಾಹ್ಮಣ ಸುವಾಸಿನಿಯರಿಗೆ ತಾಂಬೂಲದಾನ, ಫಲದಾನ ಮುಂತಾದ ದಾನಗಳನ್ನು ಭಗವಂತನ ಪ್ರೀತ್ಯರ್ಥವಾಗಿ  ಈ ಮಲಮಾಸದಲ್ಲಿ ಮಾಡಿದರೆ ಪುರುಷೋತ್ತಮ ನಾಮಕ ಭಗವಂತ  ನಮ್ಮ ಮನಸ್ಸಿನ ಮಲಗಳನ್ನೆಲ್ಲ ತೊಳೆದು ನಮ್ಮನ್ನು ಉದ್ಧರಿಸುವುದರಲ್ಲಿ ಸಂಶಯವಿಲ್ಲ. ಇಂತಹಾ ಯಾವ ಅಧಿಕ ಮಾಸದ ಪೂಜೆ ದಾನಾದಿಗಳನ್ನು ಮಾಡಲು ಎಲ್ಲರಿಗೂ ಅನುಕೂಲವಾಗಲೆಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಶ್ರೀ ಗಳವರ ಆದೇಶದೊಂದಿಗೆ ಅಪೂಪ ದಾನ ಗೋದಾನ, ದಂಪತಿ ಪೂಜೆಗಳನ್ನು ಮಾಡುವ, ಮಾಡಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ರಾಯರ ಮಠಾಧೀಶರಾದ ಶ್ರೀ ಶ್ರೀ ಸುಯತೀಂದ್ರ ತೀರ್ಥರ ೭ ನೇಚಾತುರ್ಮಾಸ್ಯ ದ ಅಂಗವಾಗಿ ಶ್ರೀ ಮಠದಲ್ಲಿ ನಿತ್ಯ ದಂಪತಿ ಪೂಜೆ, ಅಪೂಪದಾನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತಿದ್ದು ಮಂತ್ರಾಲಯ ಮಠದ ಚಾತುರ್ಮಾಸ್ಯ ಸೇವಾ ಸಮಿತಿ ಕಾರ್ಯಾಲಯದಲ್ಲಿ ವಿವರಗಳು ಲಭ್ಯವಿದ್ದು ಭಕ್ತಾದಿಗಳು ಸಂಪರ್ಕಿಸಿ ಈ ಅವಕಾಶವದ ಸದುಪಯೋಗ ಪಡೆದುಕೊಳ್ಳಬಹುದು.

Some other observations and duties which are recommended are as follows

– Dana and reading of Srimad Bhagavatam book.
– Observing upavasa (उपवास fasting) on Ekadashi’s (ऎकादशी).
– Taking food either only in the noon or in the night. That is in a day only once food is to be taken.
– Goseva (गोसेवा) and Godana (गोदान). Offering food and water to cow and its worship.
– Worshipping ghee lamp every day – Deepa Aradhana (दीपाराधना). Throughout the month a ghee lamp must be lightened and everyday it must be offered with pooja. This is called as Deepa-aradhana (दीपाराधना). This worship removes darkness, ignorance, sins, misery form once life and brings happiness. Along with worshipping deepa (lamp) in home, one should also give dana of such ghee lamps to Brahmanas or Vishnu temples (along with dakshina). These lamps can be of silver, copper or brass.- One must take darshan (दर्शन) of Lord Vishnu, Krishna everyday during this month.
– Perform anna-dana (अन्नदान) to poor and needy. Giving them alms.
– Reciting Vishnu Sahasranama, Bhagavad Gita (15th chapter) daily.
– Listening or reading Purushottama Masa Mahatmya (which is available in religious stores by the name adhika-masa mahatmya.)

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s