gist on hindu panchanga

ಹಿಂದೂ ಪಂಚಾಂಗ

ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ ,ಮತ್ತು ಕರಣಗಳು – ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು

ತಿಥಿಗಳು ಮೂವತ್ತು ( ೩೦ – 30 ). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ( ಪ್ರತಿಪದೆ )ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ( ದಿನ )ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ( ದಿನ )ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ / ಅಮಾವಾಸ್ಯೆ.

ವಾರಗಳು ( 7 )

ವಾರಗಳು ಏಳು (೭).

 • ಸೋಮವಾರ [ಇಂದುವಾಸರ]
 • ಮಂಗಳವಾರ [ಭೌಮವಾಸರ]
 • ಬುಧವಾರ [ಸೌಮ್ಯವಾಸರ]
 • ಗುರುವಾರ [ಬ್ರುಹಸ್ಪತಿವಾಸರ]
 • ಶುಕ್ರವಾರ [ಭಾರ್ಗವವಸರ]
 • ಶನಿವಾರ [ಸ್ತಿರವಾಸರ ಅಥವ ಮಂದವಾಸರ]
 • ಭಾನುವಾರ [ಭಾನುವಾಸರ]

ನವಗ್ರಹಗಳಲ್ಲಿ ರಾಹು, ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳನ್ನು ಹೆಸರಿಸಿದೆ.

ನಕ್ಷತ್ರಗಳು( ೨೭ – 27 )

 • ಅಶ್ವಿನಿ
 • ಭರಣಿ
 • ಕೃತ್ತಿಕೆ
 • ರೋಹಿಣಿ
 • ಮೃಗಶಿರ
 • ಆರ್ದ್ರೆ
 • ಪುನರ್ವಸು
 • ಪುಷ್ಯ
 • ಆಶ್ಲೇಷ
 • ಮಖೆ
 • ಪುಬ್ಬೆ
 • ಉತ್ತರೆ
 • ಹಸ್ತ
 • ಚಿತ್ತೆ
 • ಸ್ವಾತಿ
 • ವಿಶಾಖ
 • ಅನೂರಾಧ
 • ಜ್ಯೇಷ್ಠ
 • ಮೂಲ
 • ಪೂರ್ವಾಷಾಢ
 • ಉತ್ತರಾಷಾಢ
 • ಶ್ರವಣ
 • ಧನಿಷ್ಥೆ
 • ಶತಭಿಷೆ
 • ಪೂರ್ವಾಭಾದ್ರೆ
 • ಉತ್ತರಾಭಾದ್ರೆ
 • ರೇವತಿ

ಮಾಸಗಳು ( ೧೨ – 12 )

 • ಚೈತ್ರ
 • ವೈಶಾಖ
 • ಜ್ಯೇಷ್ಠ
 • ಆಷಾಢ
 • ಶ್ರಾವಣ
 • ಭಾದ್ರಪದ
 • ಆಶ್ವೀಜ
 • ಕಾರ್ತೀಕ
 • ಮಾರ್ಗಶಿರ
 • ಪುಷ್ಯ
 • ಮಾಘ
 • ಪಾಲ್ಗುಣ

ಅಧಿಕ ಮಾಸಗಳು

ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.

ಋತುಗಳು (೬ – 6 ) ( ೨ ಮಾಸಗಳಿಗೆ ಒಂದು ಋತು )

There are six ruthus. Each ruthu corresponds to two successive months. Even though the Souramana masa and Chandramana masa refer to different periods, the same ruthus are referred by both the systems.

 • ವಸಂತ ಋತು ( ಚೈತ್ರ – ವೈಶಾಖ)
 • ಗ್ರೀಶ್ಮ ಋತು (ಜ್ಯೇಷ್ಠ – ಆಷಾಢ)
 • ವರ್ಷ ಋತು (ಶ್ರಾವಣ – ಭಾದ್ರಪದ)
 • ಶರದೃತು (ಆಶ್ವೀಜ – ಕಾರ್ತೀಕ)
 • ಹೇಮಂತ ಋತು ( ಮಾರ್ಗಶಿರ – ಪುಷ್ಯ)
 • ಶಿಶಿರ ಋತು (ಮಾಘ – ಪಾಲ್ಗುಣ)

ಆಯನಗಳು ( ೨ – 2 )

ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣ ವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣ ವೆಂದೂ ಗುರುತಿಸಲಾಗಿದೆ.

ಯೋಗಗಳು ( ೨೭ – 27 )

Yoga is a benefic state that is said to exist at any instance of time. There are 27 yogas. The yogas with their Abhimani Devathas are:

 • ವಿಷ್ಕಂಭ
 • ಪ್ರೀತಿ
 • ಆಯುಷ್ಮಾನ್
 • ಸೌಭಾಗ್ಯ
 • ಶೋಭನ
 • ಅತಿಗಂಡ
 • ಸುಕರ್ಮ
 • ಧೃತಿ
 • ಶೂಲ
 • ಗಂಡ
 • ವೃದ್ಢಿ
 • ಧ್ರುವ
 • ವ್ಯಾಘಾತ
 • ಹರ್ಷಣ
 • ವಜ್ರ
 • ಸಿದ್ಧಿ
 • ವ್ಯತೀಪಾತ
 • ವರಿಯಾನ್
 • ಪರಿಘ
 • ಶಿವ
 • ಸಿದ್ಧ
 • ಸಾಧ್ಯ
 • ಶುಭ
 • ಶುಕ್ಲ
 • ಬ್ರಹ್ಮ
 • ಐಂದ್ರ
 • ವೈಧೃತಿ

ಕರಣಗಳು ( ೧೧ – 11 )

A Karana is half a thithi, or each thithi is divided into two equal parts, each being a Karana known by a specific name. There are 11 Karanas. They are listed with their Abhimani Devathas below:

 • ಬವ
 • ಬಾಲವ
 • ಕೌಲವ
 • ತೈತಲೆ
 • ಗರಜೆ
 • ವಣಿಕ್
 • ಭದ್ರೆ
 • ಶಕುನಿ
 • ಚತುಷ್ಪಾತ್
 • ನಾಗವಾನ್
 • ಕಿಂಸ್ತುಘ್ನ
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s