yuga avadhi

1 ಮಾನವ ವರ್ಷ= ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).
360 ಮಾನವ ವರ್ಷ= ದೇವತೆಗಳ 360 ದಿನ= 1 ದೇವ ವರ್ಷ.
1200 ದೇವ ವರ್ಷ= 4,32,000 ಮಾನವ ವರ್ಷ= 1 ಕಲಿಯುಗದ ಅವಧಿ.
2400 ದೇವ ವರ್ಷ= 8,64,000 ಮಾನವ ವರ್ಷ- 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ= 12,96,000 ಮಾನವ ವರ್ಷ-1 ತ್ರೇತಾ ಯುಗದ ಅವಧಿ.
4800 ದೇವ ವರ್ಷ= 17,28,000 ಮಾನವ ವರ್ಷ-1 ಕೃತ ಯುಗದ ಅವಧಿ.
12,000 ದೇವ ವರ್ಷ= 43,20,000 ಮಾನವ ವರ್ಷ= 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ’ ಒಂದು ಮನುವಿನ ವರ್ಷ.
1000 ಮಹಾಯುಗ = 1 ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ಕಲ್ಪ = 1 ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವದಿ 100 ಬ್ರಹ್ಮ ವರ್ಷ = 4,320,000 x 1000 x 720 x 100 = 31,104,0000000000 ಮಾನವ ವರ್ಷ !!

ಈ ಪ್ರಪಂಚ ಸೃಷ್ಟಿಯಾದಂದಿನಿಂದ ಒಂದು ಯುಗದ ಕಲ್ಪನೆಯಿದೆ. ಯುಗಗಳ ನಾಲ್ಕು ಗುಂಪು ಸೇರಿ ಯುಗಚಕ್ರವಾಗುತ್ತದೆ. ಎಲ್ಲಕ್ಕಿಂತ ಚಿಕ್ಕ ಯುಗ ಕಲಿಯುಗ. ಇದರ ಅವಧಿ ನಾಲ್ಕು ಲಕ್ಷದ ಮೂವತ್ತೆರಡು ಸಾವಿರ ವರ್ಷ. ದ್ವಾಪರ ಯುಗದ ಅವಧಿ ಕಲಿಯುಗದ ಎರಡರಷ್ಟು ಅಂದರೆ ಎಂಟು ಲಕ್ಷದ ಅರವತ್ನಾಲ್ಕು ಸಾವಿರ ವರ್ಷಗಳು. ಕಲಿಯುಗದ ಮೂರರಷ್ಟು ಅವಧಿ ತ್ರೇತಾಯುಗ ಅಂದರೆ ಹನ್ನೆರಡು ಲಕ್ಷದ ತೊಂಬತ್ತಾರು ಸಾವಿರ ವರ್ಷ. ಯುಗದ ಆದಿ ಕೃತಯುಗ, ಇದರ ಅವಧಿ ಕಲಿಯುಗದ ನಾಲ್ಕುಪಟ್ಟು ಅಂದರೆ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರ್ಷಗಳು. ಆದ್ದರಿಂದ ಒಂದು ಯುಗಚಕ್ರದಲ್ಲಿ ನಲವತ್ಮೂರು ಲಕ್ಷದ ಇಪ್ಪತ್ತು ಸಾವಿರ ವರ್ಷಗಳಿರುತ್ತವೆ. ಇಂತಹ ಇಪ್ಪತ್ತೊಂದು ಯುಗಚಕ್ರಗಳಿಗೆ ಹದಿನೆಂಟು ಲಕ್ಷದ ಐವತ್ತು ಸಾವಿರ ವರ್ಷಗಳನ್ನು ಸೇರಿಸಿದರೆ ಒಂದು ಮನ್ವಂತರ(30,67,20,000+18,50,000). ಇಂತಹ ಹದಿನಾಲ್ಕು ಮನ್ವಂತರಗಳು ಹಾಗು ಜೊತೆಗೆ ಮನ್ವಂತರಗಳ ನಡುವಿನ ಹದಿಮೂರು ಪ್ರಳಯಕಾಲದ ಇಪ್ಪತ್ತುಸಾವಿರ ವರ್ಷಗಳು, ಒಟ್ಟಿಗೆ 432 ಕೋಟಿ (30,85,70,000×14+20,000) ವರ್ಷಗಳು. ಇದು ಚತುರ್ಮುಖನ ಒಂದು ಹಗಲು. ಆದ್ದರಿಂದ ಚತುರ್ಮುಖನ ಒಂದು ದಿನ ಅಂದರೆ 864 ಕೋಟಿ ವರ್ಷಗಳು. ಚತುರ್ಮುಖನ ಆಯಸ್ಸು 100 ವರ್ಷ ಅಂದರೆ 31 ಸಾವಿರದ 104 ಸಾವಿರ ಕೋಟಿ ವರ್ಷ (864,0000000x30x12x100=31,104,0000000000) ಈ ರೀತಿ ಕಾಲ ಚಕ್ರ ತಿರುಗುತ್ತಿರುತ್ತದೆ. ಕಲಿ ಯುಗ ಕಲಹಗಳ ಯುಗ, ಆದರೆ ತ್ರೇತಾಯುಗದಲ್ಲೂ ಕೂಡ ರಾವಣನಂತ ದುಷ್ಟ ರಾಕ್ಷಸರಿದ್ದಿದ್ದನ್ನು ಕಾಣುತ್ತೇವೆ. ಆದ್ದರಿಂದ ಭಗವಂತನ ನಿರಂತರ ಉಪಾಸನೆ ನಮ್ಮ ಬದುಕನ್ನು ಕೃತಯುಗಕ್ಕೆ ಕೊಂಡೋಯ್ಯಬಲ್ಲುದೇ ಹೊರತು ಕಾಲವಲ್ಲ. ಕಲಿಯುಗದಲ್ಲಿದ್ದು ಕೃತಯುಗದ ಆನಂದವನ್ನು ಭಗವಂತನ ನಿರಂತರ ಉಪಾಸನೆಯಿಂದ ಪಡೆಯಬಹುದು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s